ಈ ನಾಡು ಕಂಡ ಅತ್ಯಂತ ಕ್ರಿಯಾಶೀಲ ಬರಹಗಾರರಲ್ಲಿ ತೇಜಸ್ವಿ (Tejaswi) ಅವರ ಹೆಸರು ಉಚ್ಛಸ್ಥಾಯಿ ಯಲ್ಲಿ ಕೇಳಿ ಬರುತ್ತದೆ. ಅವರು ಜೀವನವನ್ನು ನೋಡುವ ಪರಿ ಹಾಗೂ ಪರಿಸರದ ಒಡನೆ ಅವರಿಗಿದ್ದ ಸಂಬಂಧ ತೀರ ಆದ್ಯಾತ್ಮಿಕವಾದದ್ದು ಅಂದರೆ ಅತಿಶಯೋಕ್ತಿ ಆಗಲಾರದು. ಅವರ ಪ್ರತಿಯೊಂದು ಬರಹಗಳಲ್ಲಿ ಪ್ರಕೃತಿ, ಕಾಡು, ಮಲೆನಾಡಿನ ಸೊಬಗು ಮತ್ತು ಈಚೆಗೆ ವೈಜ್ಞಾನಿಕ ವಿಚಾರಗಳು ಅತ್ಯಂತ ಘಾಡವಾಗಿ ವಿನಿಮಯವಾಗಿವೆ. ಅವರ ಒಂದೊಂದು ಪುಸ್ತಕವು ಜೀವನದ ಬೇರೆ ಬೇರೆ ಆಯಾಮಗಳನ್ನು ಎಲ್ಲರಿಗೂ ಸುಲಭವಾಗಿ ಗ್ರಹಿಸುವಂತೆ ತಿಳಿಯಾದ ಹಾಸ್ಯದಿಂದ ಕೂಡಿರುತ್ತದೆ. ಬನ್ನಿ ನೋಡೋಣ ಅವರ ಹತ್ತು ಓದಲೇ ಬೇಕಾದ ಪುಸ್ತಕಗಳು ಯಾವುವು ಅಂತ ತಿಳಿದು ಕೊಳ್ಳೋಣ.
1. ಕಾಡು ಮತ್ತು ಕ್ರೌರ್ಯ
ಮಲೆನಾಡು ಹಾಗೂ ಕಾಡನ್ನು ತೇಜಸ್ವಿ ಅವರು ನೋಡುತ್ತಿದ್ದ ಮತ್ತು ಅದನ್ನು ವರ್ಣಿಸುತ್ತಿದ್ದ ಪರಿ ಅಮೋಘ. ಅದನ್ನು ಓದಿದವನೆ ಬಲ್ಲ. ಈ ಕಥೆಯಲ್ಲಿ ಕಾಡು ಹಾಗೂ ಅಲ್ಲಿ ವಾಸ ಮಾಡುವ ಜನರ ಮಾನಸಿಕ ಸ್ಥಿತಿಯನ್ನು ಮನಮುಟ್ಟುವಂತೆ ಒಂದು ಕಾವ್ಯವಾಗಿ ರೂಪಿಸಿದ್ದಾರೆ.
2. ಅಬಚೂರಿನ ಪೋಸ್ಟ್ ಆಫೀಸ್
ಒಂದು ಚಿಕ್ಕ ಹಳ್ಳಿಯಲ್ಲಿ ಪೋಸ್ಟ್ ಆಫೀಸ್ ಬಂದ ಮೇಲೆ ಆಗುವ ಬದಲವಾಣೆಗಳು, ಅಲ್ಲಿನ ಜನರ ಮೇಲೆ ಅದರ ಪ್ರಭಾವ ಮತ್ತು ಆಧುನಿಕತೆಯ ಇನ್ನೊಂದು ಮುಖವನ್ನು ಅತ್ಯಂತ ಹಾಸ್ಯವಾಗಿ ತೇಜಸ್ವಿ ಬರೆಯುತ್ತಾರೆ. ಈ ಕಥೆ ನಾಟಕವಾಗಿ ಎಲ್ಲ ರಂಗಮಂಚದ ಮೇಲೆ ಪ್ರದರ್ಶಿತವಾಗಿದೆ.
3. ಕರ್ವಾಲೋ
ಅಬ್ಬಾ ಕರ್ವಾಲೋ ಎಂಬ ಕೃತಿ ಪದಗಳನ್ನು ಮೀರಿದ್ದು. ಅತ್ಯಂತ ಹೆಚ್ಚಾಗಿ ಮಾರಾಟವಾಗಿ ಎಲ್ಲರ ಮೆಚ್ಚಿನ ಪುಸ್ತಕವಾಗಿರುವ ಈ ಪುಸ್ತಕವನ್ನು ಓದೋದೇ ಒಂದು ಖುಷಿ. ಇಲ್ಲಿ ತೇಜಸ್ವಿ ಅವರು ಹಾರುವ ಓತಿಕೇತದ ಸುತ್ತ ಆಗುವ ಅನ್ವೇಷಣೆ ಹಾಗೂ ಸಂಶೋಧನೆ ಬಗ್ಗೆ ಬರೆತಾ ನಮ್ಮನ್ನು ಕಾಡಿನ ಮಧ್ಯದೊಳಗೆ ಎಳೆದು ಕೊಂಡು ಹೋಗುತ್ತಾರೆ. ವಿಶೇಷವೆಂದರೆ ಇದು ಈಗ ಚಾಲನಿಚಿತ್ರವಾಗಿ ತಯಾರಾಗುತ್ತಿದೆ.
4. ಚಿದಂಬರ ರಹಸ್ಯ
ಹಾಸ್ಯ ಉತ್ತುಂಗದಲ್ಲಿರುವ ಈ ಕಥೆ ಜಾತಿ ಮತಗಳ ಸುತ್ತ ಹೋಗುತ್ತದೆ ಮತ್ತು ಕೊನೆಯಲ್ಲಿ ಅದು ಹೊಗೆಯ ರೂಪ್ದಲ್ಲಿ ಹೇಗೆ ಸಾಂಕ್ರಾಮಿಕವಾಗಿ ಜೀವನವನ್ನು ಅಸ್ತವ್ಯಸ್ತ ಗೊಳ್ಳುತ್ತದೆ ಎಂದು ತೇಜಸ್ವಿ ಬರೆಯುತ್ತಾರೆ.
5. ಜುಗಾರಿ ಕ್ರಾಸ್
ಜುಗಾರಿ ಕ್ರಾಸ್ ಮಲೆನಾಡಿನ ವ್ಯಾಪಾರದ ಕುರಿತು ಇರುವ ಕಥೆ ಮತ್ತು ಇಲ್ಲಿ ತೇಜಸ್ವಿ ಅವರು ಭೂಗತ ಲೋಕದ ಬಗ್ಗೆ ಬರೆದಿದ್ದು ತುಂಬಾ ಕುತೂಹಲಕಾರಿಯಾಗಿದೆ. ಸ್ವಲ್ಪ ಗ್ರಹಿಸುವ ಪ್ರಯತ್ನ ಮಾಡಿದಲ್ಲಿ ನಿಮಗೊಂದು ಅಮೋಘವಾದ ಅನುಭವವನ್ನು ನೀಡುತ್ತದೆ.
ತೇಜಸ್ವಿ ಎಂಬ ಶಕ್ತಿ ಎಲ್ಲರಿಗೂ ಒಂದು ಆದರ್ಶದ ಚಿಲುಮೆ.
ನಿಮ್ಮ ಸಮಯಕ್ಕಾಗಿ ಧನ್ಯವಾದಗಳು.
Hope you liked this articles “5 must-read books of Poorna Chandra Tejaswi”
Hope this article was informative. Make most out of your weekend while we take care of your service needs. We at Bro4u provide 50+ home services from laundry, plumber, carpenter, electrician, car wash, bike service and more to your doorstep. To all our readers on our blog, we have an exclusive offer on the Bro4u App.