ಮೊದಲನೆಯದಾಗಿ ಎಲ್ಲರಿಗೂ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯ
ಇಂದು ದೇಶದ ಹಲವಾರು ಪ್ರಾಂತ್ಯ ಗಳಲ್ಲಿ ಶ್ರೀ ವರಮಹಾಲಕ್ಷ್ಮೀಯ ಈ ವ್ರತವನ್ನು ತುಂಬಾ ಶ್ರದ್ಧಾ ಭಕ್ತಿ ಇಂದ ಎಲ್ಲರೂ ಆಚರಿಸುತ್ತಾರೆ. ಕುಟುಂಬದ ಎಲ್ಲ ಸದಸ್ಯರು ಒಟ್ಟು ಗೂಡಿ ಈ ಹಬ್ಬವನ್ನು ಆಚರಿಸುವುದು ಇನ್ನೊಂದು ವಿಶೇಷ. ಈಗಿನ ಕಾಲದ ಹಲವಾರು ಯುವಕರಿಗೆ ಈ ಹಬ್ಬ ಹರಿದಿನಗಳಲ್ಲಿ ಆಸಕ್ತಿ ಇರೋದು ತುಂಬಾ ವಿರಳ. ಅದನ್ನು ಪರಿ ಪರಿಯಾಗಿ ವಿವರಿಸುವ ಅಗತ್ಯವೂ ಇಲ್ಲ ಏಕೆಂದರೆ ಅದು ಎಲ್ಲರಿಗೂ ಗೊತ್ತಿರೋ ವಿಷಯ ತಾನೆ.ಈ ವರಮಹಾಲಕ್ಷ್ಮಿ ಹಬ್ಬದ ಹಿಂದಿನ ಪೌರಾಣಿಕ ಕಥೆಯನ್ನು ಹೇಳುವುದೇ ಈ ಬರಹದ ಮುಖ್ಯ ಉದ್ದೇಶ.
ಒಮ್ಮೆ ಲೋಕ ಪರಿಪಾಲಕನಾದ ಶಿವನು ತನ್ನ ಸತಿ ಪಾರ್ವತಿಯೊಡನೆ ಮಾತಾಡುತ್ತಾ ಕುಳಿತಿರುವಾಗ, ಪಾರ್ವತಿಗೆ ಒಂದು ಪ್ರಶ್ನೆ ತುಂಬಾ ಕಾಡಲು, ಈ ಜಗತ್ತಿನಲ್ಲಿ ತುಂಬಾ ಶ್ರೇಷ್ಠವಾದ ವ್ರತ ಯಾವುದು ಎಂದು ಶಿವನಲ್ಲಿ ಕೇಳುತ್ತಾಳೆ. ಸಕಲ ಸಂಪತ್ತು, ಐಶ್ವರ್ಯ ಮತ್ತು ಮನೋಭಿವೃದ್ಧಿಯನ್ನು ಕೊಡಬಲ್ಲಂತಹ ಆ ವ್ರತ ಯಾವುದು ಎಂದು ಕೇಳಿದಾಗ, ಮಹಾ ಶಿವನು ಈ ಜಗತ್ತಿನಲ್ಲಿ ಅಂತಹ ಪರಿ ಪೂರ್ಣವಾದ ವ್ರತ ಅಂತ ಇದ್ದರೆ ಅದು ಶ್ರೀ ವರಮಹಾಲಕ್ಷ್ಮೀಯ ವ್ರತ ಎಂದು ಉದ್ಗರಿಸುತ್ತಾನೆ. ಪಾರ್ವತಿ ತುಂಬಾ ಕುತೂಹಲದಿಂದ ಮತ್ತೆ ವಿಚಾರಿಸಲು, ಶಿವನು ಈ ವ್ರತವನ್ನು ಶ್ರಾವಣ ಮಾಸದ ಮೊದಲ ಹುಣ್ಣಿಮಯ ನಂತರ ಬರುವ ಮೊದಲ ಶುಭ ಶುಕ್ರವಾರದಂದು ಸುಮಂಗಳೆ ಯಾದ ಹೆಣ್ಣು ಮಗಳು ತನ್ನ ಪತಿಯ ಸಹಕಾರದಿಂದ ಆಚರಿಸಬೇಕು ಎಂದು ಹೇಳುತ್ತಾನೆ.
ಪಾರ್ವತಿ ಇದನ್ನು ಮೊದಲು ಯಾರಾದರೂ ಆಚರಿಸಿದ್ದಾರೆಯೇ ಎಂದು ಕೇಳಿದಾಗ, ಮೃತ್ಯುಂಜಯನಾದ ಮಹಾಶಿವನು ಇದನ್ನು ಕುಂಡನಿ ಗ್ರಾಮದ ಒಬ್ಬ ವಿಪ್ರ ಸುಮಂಗಳೆಯಾದ ಚಾರುಮತಿ ಎಂಬವಳು ಇದನ್ನು ಆಚರಿಸಿದ್ದಾಳೆ. ಒಮ್ಮೆ ತಾಯಿ ಮಹಾಲಕ್ಷ್ಮಿ ಚಾರುಮತಿಯ ಕನಸಿನಲ್ಲಿ ಬಂದು ನಾನು ನಿನ್ನ ಆದರ್ಶಪ್ರಾಯವಾದ ಜೀವನದ ಪರಿಗೆ ಪ್ರಸನ್ನಳಾಗಿ ನಿನಗೆ ಲೋಕದ ಅತಿ ಶ್ರೇಷ್ಠ ವ್ರತವಾದ ಶ್ರೀ ವರಮಹಾಲಕ್ಷ್ಮಿ ವ್ರತವನ್ನು ಆಚರಿಸು ಹಾಗೂ ನನ್ನನ್ನು ಆರಾಧಿಸು ಮತ್ತು ನಿನ್ನ ಈ ಆಚರಣೆ ಎಲ್ಲರಿಗೂ ಮಾದರಿಯಾಗಲಿ ಎಂದು ಹೇಳುತ್ತಾಳೆ. ಅಂದಿನಿಂದ ಚಾರುಮತಿ ನಡೆಸಿಕೊಂಡು ಬಂದ ಈ ವ್ರತವು ಇಂದಿಗೂ ಅಷ್ಟೇ ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ.
ಈ ವ್ರತವು ಎಲ್ಲ ಭಕ್ತರಿಗೆ ಸಿರಿ, ಭೂ, ಸರಸ್ವತಿ, ಪ್ರೀತಿ, ಕೀರ್ತಿ, ಶಾಂತಿ, ಸಂತುಷ್ಟಿ ಮತ್ತು ಪುಷ್ಟಿ ಎಂಬ ಲಕ್ಷ್ಮಿಯ ಅಷ್ಟ ಅವತಾರಗಳ ಸಿದ್ಧಿಯನ್ನು ಪರಿಪಾಲಿಸುತ್ತದೆ ಎಂದು ನಂಬಿಕೆ.
ನಮಸ್ಕಾರ. ಸರ್ವೇ ಜನ ಸುಖಿನೋ ಭವಂತು!
ಬೆಂಗಳೂರಲ್ಲಿ ಯಾವುದೇ ತರಹದ ಪೂಜೆಗೆ ಪುರೋಹಿತರು ಬೇಕಾದಲ್ಲಿ
Hope this article was informative. Make most out of your weekend while we take care of your service needs. We at Bro4u provide 50+ home services from Purohits, plumber, carpenter, electrician, Tv repair, car wash, bike service and more to your doorstep. To all our readers on our blog, we have an exclusive offer on the Bro4u App.