ಸಾಮಾನ್ಯ ‘ಕನ್ನಡಿ’ಗ – ವಿಶ್ವ ಮಾನವ

“ಸತ್ತಂತಿಹರನು ಬಡಿದೆಚ್ಚರಿಸು

ಕಚ್ಚಾಡುವರನು ಕೂಡಿಸಿ ಒಲಿಸು”

ಎಂಬ ಕುವೆಂಪುರವರ ಸಂದೇಶ ಇಡೀ ವಿಶ್ವಕ್ಕೆ ವಿಶ್ವ ಮಾನವರನ್ನಾಗಿ ಮಾಡಬೇಕೆಂಬ ಕರೆಯಾಗಿತ್ತು. ಬಹುಶಃ ಕನ್ನಡಿಗರಿಗಿಂತ ಇದನ್ನು ಹೆಚ್ಚು ಎತ್ತಿಹಿಡಿಯುವರು ಬೆರಳೆಣಿಕೆಯ ಮಂದಿಯಷ್ಟೆ. ಯಾರೇ ವ್ಯಕ್ತಿ ತನ್ನ ಊರನ್ನು ಬಿಟ್ಟು ಬೇರೆ ಪ್ರದೇಶಕ್ಕೆ ಹೋದರೆ ಮೊದಲು ಅವನಿಗೆ ಆಗುವಂಥ ತೊಡಕು ಭಾಷೆ ಮತ್ತು ಸಂಸ್ಕೃತಿ. ಸಂಸ್ಕೃತಿಯ ಬದಲಾವಣೆಗೆ ಹೊಂದಿಕೊಳ್ಳ ಬಹುದು ಆದರೆ ಭಾಷೆಯ ಅಂತರವಿದ್ದಲ್ಲಿ ಇರುವುದು ಬಹಳ ಕಷ್ಟ. ಜಾಗ ತನ್ನದು, ಆದರೆ ವ್ಯಕ್ತಿಗಳು ತನ್ನವರಲ್ಲ ಎಂಬ ಶೂನ್ಯ ಭಾವ ನಿಜಕ್ಕೂ ಮರುಕ ಹುಟ್ಟಿಸುತ್ತದೆ. ಆದರೆ ನೆಲದ ಸೊಗಡೊ, ಕನ್ನಡಿಗರ ಔದಾರ್ಯವೊ ಏನೊ ತಿಳಿಯದು. ಬೆಂಗಳೂರಿಗೆ ಬೇರೆ ಪ್ರದೇಶದಿಂದ ಬರುವರಿಗೆ ಈ ಸಮಸ್ಯೆ ಉಂಟಾಗುವುದಿಲ್ಲ.

 

ಹೊರ ಜಗತ್ತಿಗೆ ಸ್ಥಳೀಯ ಭಾಷೆ ಎಷ್ಟು ಮುಖ್ಯ ಎನ್ನುವುದು ಭಾಷಾಂತರರಿಗೆ ಮಾತ್ರ ಗೊತ್ತು. ಇದಕ್ಕೆ ನಿದರ್ಶನವೆಂದರೆ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಹಾಗೂ ಬೇರೆ ಬೇರೆ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಪ್ರದೇಶದವರು. ಆದರೆ ಅವರಿಗೆ ನಾವು ಸ್ಥಳೀಯ ಭಾಷೆ ಕಲಿಯುವ ಅವಕಾಶವೇ ಕೊಟ್ಟಿಲ್ಲ. ಒಬ್ಬ ಆಟೋ ಚಾಲಕನೂ ಸಹ ಹಿಂದಿಯವನ ಜೊತೆ ಹಿಂದಿಯಲ್ಲಿ, ತೆಲುಗಿನವನ ಜೊತೆ ತೆಲುಗಿನಲ್ಲಿ ಚರ್ಚಿಸುತ್ತಾನೆ. ಆಟೋ ಚಾಲಕರಲ್ಲದೆ,ಬಸ್ ನಿರ್ವಾಹಕ, ಹೋಟೆಲ್ ಮಾಣಿ ಯಾರೇ ಆಗಿರಲಿ ಒಬ್ಬ ಹೊರ ಪ್ರದೇಶನಿಗೆ ಕನ್ನಡಿಗನು ಕನ್ನಡಿಯಾಗುತ್ತಾನೆ. ಇಷ್ಟಾದರೂ ಹೊರಪ್ರದೇಶಿಗರಿಗೆ ಕನ್ನಡಿಗನು ಸಾಮಾನ್ಯನೆ ಆದರೂ ಅವನು ‘ವಿಶ್ವ ಮಾನವನೇ’ ಸರಿ.

ಕುವೆಂಪುರವರ ಈ ಎರಡು ಸಾಲಿನಿಂದ ಈ ‘ಸಾಮಾನ್ಯ ಕನ್ನಡಿಗನ’ ವಿಶ್ವ ಮಾನವ ಸಂದೇಶದಿಂದ ಮುಗಿಸುತ್ತೇನೆ.

“ಬಾರಿಸು ಕನ್ನಡ ಡಿಂಡಿಮವ

ಓ ಕರ್ನಾಟಕ ಹೃದಯ ಶಿವ”

ನಾವು ನವೆಂಬರ್ ಕನ್ನಡಿಗರಾಗದೆ, ಕನ್ನಡಿಗರಾಗೋಣ .

ನಿಮ್ಮ ಕನ್ನಡಿಗರೇ ಶುರು ಮಾಡಿರುವ bro4u.com ಅನ್ನು ಪ್ರೋತ್ಸಾಹಿಸಿ.

Hope this article was informative. Make most out of your weekend while we take care of your service needs. We at Bro4u provide 50+ home services from laundry, plumber, carpenter, electrician, car wash, Washing machine repair, bike service and more to your doorstep. To all our readers on our blog, we have an exclusive offer on the Bro4u App.

Best -Home Services App-in Bangalore - Bro4u

Best Home Sevices App in Bangalore – bro4u

4.9
We will be happy to hear your thoughts

Leave a reply